ಕರ್ನಾಟಕ ಸರ್ಕಾರ
 (ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ)
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿ, ನಂ.17,
ಜಯನಿವಾಸ, ಶಂಕರಮಠ ರಸ್ತೆ, ಬಸವನಗುಡಿ,
ಬೆಂಗಳೂರು-560 004.
ದೂರವಾಣಿ ಸಂಖ್ಯೆ:080-26610326, ಇ-ಮೇಲ್ ವಿಳಾಸ: directorcoopaudit.123@gmail.com.

ಪ್ರಕಟಣೆ ಸಂಖ್ಯೆ : ಲೆಪಶಾ-1/ಇತರೆ/ಪಪ್ರ/75/2012-13
ದಿನಾಂಕ:12-02-2013

                                            ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯಿದೆ 2012ರ ಕಲಂ 63(1) ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಕಾಯಿದೆ 2012ರ ಕಲಂ 33(1)ರನ್ವಯ ಕರ್ನಾಟಕ ರಾಜ್ಯದಲ್ಲಿರುವ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿಗಳ ಲೆಕ್ಕಪರಿಶೋಧನೆಯನ್ನು ನಿರ್ವಹಿಸಲು ಅರ್ಹ ಸನ್ನದು ಲೆಕ್ಕಪರಿಶೋಧಕರು / ಪರಿಶೋಧಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಸೇರಲ್ಪಡಲು ಇಚ್ಛಿಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಇಲಾಖೆಯ ವೆಬ್‍ಸೈಟ್ ವಿಳಾಸ http://www.sahakaradarpana.kar.nic.in ರಲ್ಲಿ ನಿಗದಿಪಡಿಸಿ ಪ್ರಚುರ ಪಡಿಸಲಾದ ಅರ್ಜಿ ನಮೂನೆಯಲ್ಲಿ ಆನ್‍ಲೈನ್ (ONLINE) ಮೂಲಕ ಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ, ದಿನಾಂಕ: 05-03-2013 ರೊಳಗೆ ಅರ್ಜಿಯನ್ನು ಸಲ್ಲಿಸುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿಯ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು. ಅಥವಾ ಸಂಬಂಧಿತ ವಿಚಾರಣೆಗೆ ಇ-ಮೇಲ್ ವಿಳಾಸ: directorcoopaudit.123@gmail.com ಗೆ ವಿವರಗಳನ್ನು ಕಳುಹಿಸುವುದು. ಹೆಚ್ಚಿನ ಮಾಹಿತಿಗಾಗಿ ಮೇಲೆ ತಿಳಿಸಿದ ಇಲಾಖಾ ವೆಬ್‍ಸೈಟ್ ಅನ್ನು ಸಹಾ ಗಮನಿಸುವುದು.

                                                                                                                                              ಸಹಿ ನಿರ್ದೇಶಕರು,
                                                                                                         ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಸಂಪರ್ಕಿಸಬೇಕಾದ

ದೂರವಾಣಿ ಸಂಖ್ಯೆ:
080-26610372(ಜಂಟಿ ನಿರ್ದೇಶಕರು, (ಲೆಕ್ಕಪರಿಶೋಧನೆ-1))
080-26604493(ಉಪ ನಿರ್ದೇಶಕರು, (ಲೆಕ್ಕಪರಿಶೋಧನೆ-1))
9844279099(ಜಂಟಿ ನಿರ್ದೇಶಕರು, (ಲೆಕ್ಕಪರಿಶೋಧನೆ-1))
9741112969 (ಉಪ ನಿರ್ದೇಶಕರು, (ಲೆಕ್ಕಪರಿಶೋಧನೆ-1))
9886116079 (ಉಪ ನಿರ್ದೇಶಕರು, ಇಲಾಖೆಯ ನೋಡಲ್ ಅಧಿಕಾರಿ)).
 
 

Design by National Informatics Center,Bangalore-01. 
No of visitors : Free Web Counter